ಗಗನದ ಚುಕ್ಕಿ ಕೈಗೆಟಕುವುದು ದುಷ್ತರವು
ಆಸೆಯೆಂಬುದು ಮಾಯೆ
ಇದ್ದುದರಲಿ ಸುಖವ ಕಾಣು
ದೂರದ ಬೆಟ್ಟ ನುಣ್ಣಗೆ ತಿಳಿ
ನೆಚ್ಚಿ ಮಾಡು ಕಾಯಕವ
ಹುಚ್ಚನೆಂದರು ಸಲ್ಲ
ವ್ಯರ್ಥವಾಗುವುದು ಬೆವರಹನಿ
ಮೆಚ್ಚಿ ವೆಚ್ಚವ ಕಾಣುವೆ
ವಿದ್ಯೆಯೊಳು ಭಗೀರಥನ ನಾಗು
ಪುಟಿದೇಳು ಕಾರಂಜಿಯಂತೆ
ಬಡಭಾಗ್ನಿಯಂತೆ ಹೊರ ಬಾ
ಕಲಕು ಸಮುದ್ರವ ಕೈಯಲ್ಲಿ
ಸಮಸ್ತ ಜಗತ್ತ ಅಂಗೈಲಿ
ಸಮಾಜಕ್ಕೆ ಶಾಂತಿಯ ಬಿತ್ತು
ವಿಶ್ವ ಮಾನವ ತತ್ವ ಪಸರಿಸು
ಹೆಸರು: ನಾಗರಾಜ್ ಹೆಚ್ ಎ ಹುಲಿಮಂಗಲ